ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ದಿನಾಂಕ 14 ರಿಂದ 20 ನವೆಂಬರ್ 2025 ರ ವರೆಗೆ ನಡೆಯುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸೋಜನ್. ಕೆ.ಜಿ ರವರು ದೀಪಬೆಳಗಿಸಿ ಉದ್ಘಾಟಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಕೃಷ್ಣ ಭಟ್ ರವರು ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿದ ಎನ್.ಡಿ.ಎಲ್ ಐ ಕ್ಲಬ್ ಗೆ ಚಾಲನೆ ನೀಡಿ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಕಾಲೇಕಿನ ಉಪನ್ಯಾಸಕರಾದ ಶ್ರೀಮತಿ ಸುನಿತಾರವರು ಗ್ರಂಥಾಲಯಕ್ಕೆ ಕಲಾಕೃತಿಯೊಂದನ್ನು ದೇಣಿಗೆಯಾಗಿ ನೀಡಿದರು.
ಗ್ರಂಥಪಾಲಕರಾದ ವೆಂಕಟೇಶ್ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ. ನಿಕೇತನಾ ಹಾಗೂ ಪ್ರೊ. ಪ್ರಸನ್ನ ಪಿ.ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಕೋರಿದರು. ಸಹಾಯಕ ಗ್ರಂಥಪಾಲಕಿಯರಾದ ಶಮ್ಮಿ ಹಾಗೂ ವಿಜಯಲಕ್ಷ್ಮಿ ಸಹಕರಿಸಿದರು. ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಒಂದು ವಾರದ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ, ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳ ಪ್ರದರ್ಶನ, ವಿದ್ಯಾರ್ಥಿನಿಯರಿಗಾಗಿ ಪ್ರಬಂಧ ಸ್ಪರ್ಧೆ, ಪುಸ್ತಕ ವಿಮರ್ಶೆ, ಪೋಸ್ಟರ್ ಮತ್ತು ಪೈಂಟಿಂಗ್ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು 20 ನೇ ನವೆಂಬರ್ ಗೆ ಸಮಾರೋಪ ಸಮಾರಂಭ ನಡೆಯಲಿದೆ.