ಹಣದ ಸುರಕ್ಷತೆಗೆ ಆದ್ಯತೆ ನೀಡಿ
# ವಿಜಯವಾಣಿ ಸುದ್ದಿಜಾಲ ಗಂಗಾವತಿ ಬ್ಯಾಂಕ್ ವಂಚನೆ ಪ್ರಕರಣ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಆರ್ಥಿಕ ಜಾಗೃತಿ ಅಗತ್ಯ ಎಂದು ಬೆಂಗಳೂರಿನ ಅಪರಾಧ ವಿಭಾಗದ ಸಿಐಡಿ ವಿ.ಟಿ. ಶ್ರೀನಿವಾಸ ಹೇಳಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಅಂಬೇಡ್ಕರ್ ಭವನದಲ್ಲಿ ಎಸ್‌ಬಿಐ ಆರ್ಥಿಕ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ಅರ್ಥಿಕ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಸೈಬರ್ ಅಪರಾಧ ನಿಯಂತ್ರಣಕ್ಕೆ ಯುವಕರು ಜಾಗೃತರಾಗಬೇಕಿದ್ದು, ಸುಧಾರಿತ ತಂತ್ರಜ್ಞಾನದ
ತಂತ್ರಗಳನ್ನು ಅರಿತುಕೊಳ್ಳಬೇಕು. ಖಾತೆಯಲ್ಲಿನ ಹಣ ಸುರಕ್ಷತೆಗೆ ಆದ್ಯತೆ ನೀಡಬೇಕಿದ್ದು, ಇ-ಮೇಲ್, ಇಂಟರ್‌ನೆಟ್ ಬಗ್ಗೆ ನಿಗಾವಹಿಸಬೇಕು. ಅನುಮಾನ ಕಂಡು ಬಂದಲ್ಲಿ ಸೈಬರ್ ಕ್ರೈಂ ವಿಭಾಗಕ್ಕೆ ಮಾಹಿತಿ ನೀಡುವಂತೆ ಸಲಹೆ ನೀಡಿದರು. ಜನ ಸುರಕ್ಷಾ ಯೋಜನೆ ಕುರಿತು ಎಸ್‌ಬಿಐ ಲೀಡ್ ಬ್ಯಾಂಕ್ ವ್ಯವಸ್ಥಾಪಕ ವೀರೇಂದ್ರ ಕುಮಾರ, ಠೇವಣಿ ಮತ್ತು ಸಾಲ ಯೋಜನೆ ಕುರಿತು ಸ್ಥಳೀಯ ಶಾಖೆ ವ್ಯವಸ್ಥಾಪಕ ಬ್ರಹ್ಮ ದೇವಸಿಂಗ್ ಮಾಹಿತಿ ನೀಡಿದರು.ಕಾಲೇಜಿನ ಪ್ರಾಚಾರ್ಯ
ಡಾ.ಮುಮ್ರಾಜ್ ಬೇಗಂ, ಎಸ್‌ಬಿಐ ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ.ಆಂಜನೇಯ, ಪ್ರಾಧ್ಯಾಪಕರಾದ ಡಾ.ಶಿವರಾಜ ಗುರಿಕಾರ್, ಪ್ರೊ.ಜಗದೇವಿ ಕಲಶೆಟ್ಟಿ, ಬಾರಿಕರ ಫಣಿರಾಜ್, ದೊರೆ ಬಾಬು, ಭೂಮಿಕಾ, ಸುಮಲತಾ, ಸಲೀಂ, ಮಲ್ಲಿಕಾರ್ಜುನ್, ರಾಘವನ್ನ ಅತಿಥಿ ಉಪನ್ಯಾಸಕರಾದ ಪಂಚಾಕ್ಷ ರಹಿರೇಮಠ, ಪವನ್‌ಕುಮಾರ್, ಗುಂಡೂರ್ ಶಾಹೀನ್ ಕೌಸರ್, ದೊಡ್ಡಬಸಮ್ಮ ಪರ್ವಿನ ಸುಲ್ತಾನ್, ಡಾ.ಮಂಜಣ್ಣ, ಡಾ. ಪಾಗುಂಡಪ್ಪ, ಡಾ. ಬಸವರಾಜ ಗೌಡನಬಾವಿ, ಡಾ.ಉಷಾರಾಣಿ ಇತರರಿದ್ದರು.