ತರ್ಕ-ತತ್ವ ಸ್ಪರ್ಧೆ ಮೂಲಕ ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಡಿಜಿಟಲ್ ವಿಷಯ ರಚನೆ ಕ್ಷೇತ್ರದೆಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಈ ಕಾರ್ಯಕ್ರಮವನ್ನು ಸಂಪೂರ್ಣ ಮೋಡಿನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ನಾನಾ ರಾಜ್ಯಗಳ ವಿದ್ಯಾರ್ಥಿಗಳು ಸೇರಿ ಎಸ್. ಕೆಎನ್‌ಜಿ ಕಾಲೇಜಿನ ಬಿಬಿಎ ವಿಭಾಗದ 3 ತಂಡಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ ಎಲ್ಲ ತಂಡಗಳಿಗೆ ಒಂದೇ ವಿಷಯಕ್ಕೆ ಸಂಬಂಧಿಸಿದ ಪ್ರಕರಣ (ಕೇಸ್ ಸ್ಟಡಿ) ನೀಡಿ, ಐದು ನಿಮಿಷಗಳಲ್ಲಿ ವಿದ್ಯಾರ್ಥಿಗಳು ಅದಕ್ಕೆ ಸೂಕ್ತ ಉತ್ತರ
ವಿಡಿಯೊ ಮೂಲಕ ಸಲ್ಲಿಸಬೇಕಿರುತ್ತದೆ. ಅದರಲ್ಲಿ ಎಸ್‌ಕೆಎನ್‌ಜಿ ಕಾಲೇಜಿನ
ದ್ವಿತೀಯ
ವರ್ಷದ
ಬಿಬಿಎ
3
ವಿದ್ಯಾರ್ಥಿಗಳಾದ ಯು.ಪಾವನಿ, ಕವನಾ ವಂಟಿ, ರಶ್ಮಿ ದುರ್ಗಿಗುಡಿ ಅವರ ತಂಡ ವಿಭಿನ್ನ ಮತ್ತು ಕ್ರಿಯಾತ್ಮಕವಾಗಿ ಉತ್ತರ ನೀಡಿದ್ದಕ್ಕೆ, ಪ್ರಥಮ ಬಹುಮಾನ ಪಡೆದಿದೆ. ಜ.6ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಶೋಭಾ ಸ್ಪರ್ಧೆ ವಿಜೇತರನ್ನು ಘೋಷಿಸಿದರು. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಡಾ. ಮುಲ್ತಾಜ್ ಬೇಗಂ, ಬಿಬಿಎ ವಿಭಾಗದ ಪ್ರಾಧ್ಯಾಪಕ ಅನಿತಾ ಕೆ. ಎಂ, ಅಶ್ರಫ್ ಆಳಳ್ಳಿ, ವಿನಯ್ ಕುಮಾರ್ ವಿ.ಪಿ .ಮಹಾಂತೇಶ್ ತೊಂಡಿಹಾಳ ಸೇರಿ ಕಾಲೇಜಿನ ನಾನಾ ವಿಭಾಗಗಳ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.