ಮಾನವನ ಮನಃ ಪರಿವರ್ತನೆಯೇ ಸಾಹಿತ್ಯದ ಮೂಲ ಆಶಯವಾಗಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಾಸಸಾಹಿತ್ಯಕ್ಕೆ ಮಹತ್ವದ ಸ್ಥಾನವಿದ್ದು, ವ್ಯಕ್ತಿ ಬದುಕುವ ರೀತಿ, ನೀತಿ, ನಡವಳಿಕೆ ಬಗ್ಗೆ ಸಂದೇಶ ನೀಡಿದೆ. ದಾಸ ಸಾಹಿತ್ಯ ಭಕ್ತಿ ಪೂರ್ವಕವಾಗಿ ಜೀವನ ನಡೆಸಲು ತಿಳಿಸಿದೆ. ಕೀರ್ತನೆಗಳನ್ನು ಕೇಳಿದರೆ ಕೋಪ, ಕ್ರೋಧ, ಮದ, ಮತ್ಸರಗಳು ಇಲ್ಲದಂತಾಗುತ್ತವೆ. ಇಂದಿನ ಯುವ
ಸಮೂಹ ಇಲ್ಲಸಲ್ಲದ ವಿಷಯಗಳಿಗೆ ಆದ್ಯತೆ ನೀಡಿ ಒತ್ತಡಕ್ಕೆ ಸಿಲುಕಿ, ಗುರಿಯಿಲ್ಲದ ಜೀವನ
ಸಮಗ್ರ ದಾಸ ಸಾಹಿತ್ಯ ಅಧ್ಯಯನ ನೀಡ
ಕನ್ನಡ ವಿವಿದ್ಯಾಲಯ ಹಂಪಿ ಜೀವನ ಸಿಂಧನೂರಿನ ಕನ್ನಡ ಉಪನ್ಯಾಸಕಿ ಡಾ. ಮಧುಮತಿ ದೇಶಪಾಂಡೆ ಮಾತನಾಡಿ, ಗಲಗಲಿ ಅವ್ವ ಕನ್ನಡದ ಮೊದಲ ಹರಿದಾಸ ಮಹಿಳೆ. ಕನಕಗಿರಿ ತಾಲೂಕಿನ ನವಲಿ ಗ್ರಾಮದವಳು. ಮಹಿಳೆಯರ ನೋವು ನುಂಗಿ ಹಾಡುಗಳ ಮೂಲಕ ಆ ನೋವನ್ನು ಅಭಿವ್ಯಕ್ತಿಸಿದ್ದಾಳೆ. ಹರಪನಹಳ್ಳಿ ಭೀಮಪ್ಪ ಗಾಢವಾಗಿ ತನ್ನ ಕೃತಿಗಳಲ್ಲಿ ತೆರೆದಿಟ್ಟಿದ್ದಾಳೆ.
ಹೆಳವನಕಟ್ಟೆ ಗಿರಿಯಮ್ಮ ವಿಭಿನ್ನ ಮಾರ್ಗದ ವಿರಾಗಿಣಿ. ಮದುವೆಯಾಗಿ ವೈರಾಗ್ಯದ ಕಡೆ ತಿರುಗಿ, ಗಂಡನಿಗೆ ಬೇರೊಂದು ಮದುವೆ
ಮಾಡಿ, ಮಂತ್ರಾಲಯದ ಸುತೀ೦ದ್ರ
ತೀರ್ಥರಿಂದ ಅನುಗ್ರಹಿತಳಾಗಿ, ಗೋಪಾಲದಾಸರಿಂದ ಆಶೀರ್ವಾದ ಪಡೆದು
ವಿಶಿಷ್ಠ ಕೀರ್ತನೆಗಳನ್ನು ರಚಿಸಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಮುಮ್ರಾಜ್ ಬೇಗಂ, ಸಮಗ್ರ ದಾಸ ಸಾಹಿತ್ಯ ಅಧ್ಯಯನ ಪೀಠದ ಸಂಚಾಲಕ ಡಾ.ಶಿವಾನಂದ ವಿರಕ್ತಮಠ, ಐಕ್ಯೂಎಸಿ ಸಂಚಾಲಕ ಡಾ. ಎಸ್.ಜಿ.ಗುರಿಕಾರ, ಸಮಾ, ಪವನಕುಮಾರ ಗುಂಡೂರು, ಡಾ.ಬಸವರಾಜ ಗೌಡನಬಾವಿ ಹಾಗೂ ಇತರರಿದ್ದರು.